Catharsis -Unlock Your Talent & Creativity: POEM by NAG CHETAN and RAFEEK !

  • IASbaba
  • April 10, 2020
  • 0
Catharsis- IASbaba’s Creative Minds
Print Friendly, PDF & Email

Catharsis -Unlock Your Talent & Creativity: POEM by NAG CHETAN  and RAFEEK!

 

Hello Friends,

You must be aware of the term ‘catharsis’. It is the process of releasing and thereby providing relief from, strong or repressed emotions.

Recently we have launched a new initiative by the name Catharsis -Unlock Your Talent & Creativity!

Today’s work is a KANNADA POEM written by NAG CHETAN and RAFEEK. And here we present to you the thoughtful writing by both of them

Well done, Keep it up !!

POEM by NAG CHETAN (About Life Journey)

 


POEM by RAFEEK

ನನ್ನ ಕನ್ನಡ ಸಾಹಿತ್ಯ….. (About Kannada Literature)

ಓದುತಿಹೆನು ಕನ್ನಡ ಸಾಹಿತ್ಯವ,
ಸವಿಯುತಿಹೆನು ರಸದೌತಣವ |
ಹಸನಾಗಲು ನನ್ನ ಈ ತನುವು,
ಮನಸಾಯಿತು ಸುಸಂಸ್ಕೃತವು ||
ಕುರುಹುವಾಗಲು ಹಲ್ಮಿಡಿ ಶಾಸನವು,
ಉಪಲಬ್ಧ ವಾಗಲು ಕವಿರಾಜಮಾರ್ಗವು |
ಉದಯವಾಯಿತು ನಮ್ಮ ಈ ಕನ್ನಡವು,
ಸಾರ್ವಭೌಮತ್ವದ ಕನ್ನಡ ಸಾಹಿತ್ಯವು ||
ಆದಿಕವಿ ಪಂಪನ ಚಂಪೂ ಯುಗವು,
ಮಾರ್ಗ ಯುಗವು ಪ್ರೌಢ ಯುಗವು |
ಸಂಸ್ಕೃತಭೂಯಿಷ್ಟದಲಿ ಕನ್ನಡದ ಗರಿಮೆಯು,
ಅದನ್ನ ಎತ್ತಿ ಹಿಡಿದರು ರನ್ನ,ಜನ್ನ, ನಾಗಚಂದ್ರರು ||
 ಸಾಹಿತ್ಯದಲ್ಲಿ  ವಚನ ಸಾಹಿತ್ಯದ ಭಾಷೆಯು,
 ಈ ಸಂಕ್ರಮಣ ಕಾಲದಲಿ ಬಸವಯುಗವು |
ಬಸವಣ್ಣಗೆ  ಪ್ರತಿಬಿಂಬ ಅಕ್ಕ,ಅಲ್ಲಮ,ದಾಸಿಮಯ್ಯರು,
ದನಿಗೂಡಿಸಲು ದಮನವಾಯಿತು ಅಸ್ಪ್ರಶ್ಯತೆಯು ||
 ದೇಸಿಯುಗದಲಿ ರಗಳೆ-ಷಟ್ಪದಿ-ಸಾಂಗತ್ಯವು,
ಛಂದಸ್ಸಲಂಕಾರ ಆಳಿದ ಪದ್ಯ ಸಾಹಿತ್ಯವು |
ರೂಪಕಚಕ್ರವರ್ತಿಯಾಗಲು  ಕುಮಾರವ್ಯಾಸನು,
ಸರಿಸಾಟಿಯೆಂಬಂತೆ ಹರಿಹರ,ರಾಘವಾಂಕ, ರತ್ನಾಕರವರ್ಣಿಯು ||
ಶಿವಕೋಟ್ಯಾಚಾರ್ಯರ ವಡ್ಡಾರಾಧನೆ ಗದ್ಯ ಸಾಹಿತ್ಯವು,
ಪ್ರಗತಿಶೀಲ, ದಲಿತ ಸಾಹಿತ್ಯ ಮೂಡಿಬರಲೂ |
ಕನ್ನಡ ಸಾಹಿತ್ಯವು ಸಂಪದ್ಭರಿತವು, ಅಖಂಡವು,
ತೀಲಕ ಇಟ್ಟಂತೆ ಕುವೆಂಪು,ಬೇಂದ್ರೆ,ಬಿ.ಎಂ.ಶ್ರೀ ಈ ನವಕವೀಗಳು ||
ಅದನ್ನೊದಲು ಪಾವನ ವಾಯಿತು ನನ್ನ ಈ ಜನುಮವು.|
ಮತ್ತೆ ಇಲ್ಲೆ ಹುಟ್ಟಲು ಆಶಿಸುತೀಹುದು ಈ ಕನ್ನಡದ ಕೂಸು. ||

                                               ನಿಮ್ಮ ರಫೀಕ್

ನಾನು ನನ್ನ ಕನಸು   (My Dream)

ಮುಂಜಾನೆಯ ಮುಸುಕಿನಲಿ ವಸಂತ ಮಾಸದಲಿ,
ಮನಸಿನ ಮೂಲೆಯಿಂದ ಕನಸೊಂದು ಚಿಗುರಿ |
ಚಿಗುರಿದ ಕನಸಲಿ ನಾ ಕವಿತೆ ಬರೆಯಲು,

ಆ  ಕವಿತೆಯು ಹಾಡಾಗಿ ಹೊರಹೊಮ್ಮಲು ||

ಚಂದಮಾಮನು ಇಣುಕಿ ನೋಡಲು ಬಾನಿನಂಚಿನಿಂದ,

ಕಡಲತೀರದ ಸದ್ದು ಹಿನ್ನಲೆ ಸಂಗೀತದಂತೆ ಗುನುಗುಟ್ಟುತಿರಲು |
ನವಿಲು ನಿಂತಿತು ಮಂಕಾಗಿ ಕುಣಿಯಲು ತಿಳಿಯದೆ,

ಅದನೊಡಲು   ಬೆಳಕ್ಕಿಯು  ಹಸನ್ಮುಖಿಯಾಗಿ ಬರುತಿರಲು ||

ನಾ ಕುಳಿತೆ  ಮುದ್ದಾದ ಮಗುವಂತೆ ಭಾವುಕನಾಗಿ,

ಈ ಸೌಂದರ್ಯವ  ಸವಿಯುತ ವಿಸ್ಮಯನಾಗಿ |
ಮರೆತೆನು ನನ್ನನ್ನೇ ನಾನು ತನ್ಮಯನಾಗಿ,
ಎಲ್ಲವು ವಿಸ್ಮಯಾ  ಎಲ್ಲವು ಅಯೋಮಯ ||
ಅಮ್ಮನಮಡಿಲಲ್ಲಿ ಕುಳಿತು ಚಂದ್ರನನ್ನು ಮುಷ್ಟಿಯಲಿ  ಬಂಧಿಸಿದಂತೆ,
ನೀಲಗಗನದಲಿ  ಹಕ್ಕಿಗಳ ಜೊತೆ ಗರಿಬಿಚ್ಚಿ ನಲಿದಾಡಿದಂತೆ |
ದುಂಬಿಯಂತೆ ಹೂವಿನ ಸುಗಂಧದಲ್ಲಿಮುಳುಗಿ   ತೇಲಾಡಿದಂತೆ,

ತಾರೆಗಳ ಬೆಳಕಿನಲ್ಲಿ ಸಖಿಯ ಜೊತೆ ಆಟ ಆಡಿದಂತೆ ||

ಮುಸ್ಸಂಜೆಯಲಿ ಮಂಜಿನಾ ಹನಿಯೊಂದು ನಾಲಿಗೆಯನ್ನು ಸ್ಪರ್ಶಿಸಲು  |

ಅಮ್ಮ ಬಂದಳು ಏಳಿಸಲು ಮಗು ಬೆಳಗಾಯಿತೆಂದು. ||

                                                                                ನಿಮ್ಮ ರಫೀಕ್


 

Be creative and find your catharsis in whichever form of creativity you are comfortable with. 

It could be anything- a song, a painting, a poem, a story, a dance performance, rangolis, jokes/humor, culinary skills, mimicry and whatnot. There is no limit to creativity. Just unleash and share it with everyone!

Why don’t you share your moments of catharsis with us?

UPSC is not only about academics but personality as well. And your personality is shaped by the creativity that you possess.  

To know more about Catharsis -Unlock Your Talent & Creativity’ Initiative and the Previous Creative work  -> CLICK HERE

We encourage you to keep the comment section alive by sharing your talents and also by commenting and encouraging the talent of your peers. We are also going to be a regular visitor here and will keep on posting the creative works by our talented team members and staff.

NOTE- You can also nominate by tagging anyone (if you know about the talent of your friend or anyone) ?

You can share your talent/creativity with us on support@iasbaba.com and ilp@iasbaba.com 

P.S: Kindly share it in a format that can be published on the website.

We believe each one of you have some hidden talent. It’s time that you explore more about yourselves and remain positive throughout this journey. Make the best use of this opportunity!

Thank You

IASbaba

Search now.....

Sign Up To Receive Regular Updates