ಕತ್ತಲ ಹಾದಿಯಲ್ಲಿ ನಡೆಯಬಹುದು.. ಕನಸುಗಳಿಲ್ಲದ ಹಾದಿಯಲ್ಲಿ ಹೇಗೆ ನಡೆಯಲಿ? ಎಂದು ಗಿರೀಶ್ ಕಾರ್ನಾಡ್ ಅವರು ಒಂದೊಮ್ಮೆ ಕೇಳಿದ್ದರು.
ಅಂತಹಾ ಕನಸುಗಳ ಲೋಕದಲ್ಲಿ ಐಎಎಸ್ ಶ್ರೇಣಿಯ ಹುದ್ದೆ ಎನ್ನುವುದು ಬಯಕೆಗಳ ಮುಕುಟಮಣಿ ಎನ್ನಬಹುದು.
ಆ ಕನಸಿನ ಹಾದಿ ಎಂದಿಗೂ ಹಾಲು ಹಾದಿಯಲ್ಲ. ಕಲ್ಲು ಮುಳ್ಳಿನ ಹಾದಿ. ಆದರೆ ಆ ಹಾದಿಯನ್ನು ಸಹನೀಯಗೊಳಿಸುವ ಪರಿಕರಗಳೂ ನಮ್ಮ ಬಳಿಯಲ್ಲೇ ಇರುತ್ತವೆ. ಒಮ್ಮೆ ಗುರಿಯು ಕೈಗೆಟುಕಿದ ಬಳಿಕ ಅದು ಜೇನಹಾದಿಯಾಗುತ್ತದೆ.
ಈ ಕನಸಿನ ಫಲವು ಕೈಗೆಟುಕಲು ಅದಮ್ಯಮೋಹ, ಪ್ರಬಲ ವಾಂಛೆ, ದಣಿವರಿಯದ ಶ್ರಮ, ಕಠಿಣ ತರಬೇತಿ, ಅಡ್ಡಿಗಳಿಗೆ ಎದೆಗುಂದದ ಧೀಶಕ್ತಿ, ಎಲ್ಲವೂ ಅತ್ಯವಶ್ಯಕ.
ನಮ್ಮ ಕನಸುಗಳು ಮೇಣದಬತ್ತಿಯ ತುದಿಯ ಬೆಳಕಾಗಿದ್ದಾಗ ಗಾಳಿಯು ಬಂದು ಅದನ್ನು ನಂದಿಸಬಹುದು. ಆದರೆ ಅದೇ ಕನಸು ಕಾಡ್ಗಿಚ್ಚಿನಂತಾದಾಗ ಗಾಳಿಯು ಕೂಡಾ ಹೆದರಿ ಅದಕ್ಕೆ ಸಹಕರಿಸುತ್ತದೆ. ಅಂತಹ ಗಮ್ಯವನ್ನು ತಲುಪಿರಿ. ನಿಮ್ಮ ಜೀವನದ ಯಶಸ್ಸಿನ ಉಚ್ಛ್ರಾಯ ಹಂತವನ್ನು ತಲುಪಿರಿ.
ಈ ಕಲಿಕೆಯಲ್ಲಿ ಇಷ್ಟೆಲ್ಲಾ ಕಠಿಣ ಹಾದಿಯನ್ನು ಸವೆಸಿದರೂ ನಮ್ಮ ಕೆಲವೇ ತಪ್ಪು ನಿರ್ಧಾರಗಳಿಂದ ಯಶಸ್ಸಿನ ಹಾದಿ ದೂರವಾಗಿರುವುದೂ ಇದೆ. ಏನು ಕಾರಣ? ಸರಿಯಾದ ಐಚ್ಚಿಕ ವಿಷಯದ ಆಯ್ಕೆ ಇವುಗಳಲ್ಲಿ ಪ್ರಮುಖವಾದುದು !!
ಆ ನಿಟ್ಟಿನಲ್ಲಿ ವಿವೇಚಿಸಿದಾಗ, ಕನ್ನಡ ಸಾಹಿತ್ಯವನ್ನು ತೆಗೆದುಕೊಳ್ಳುವುದು ಕಲಿಕೆಯ ಸುಗಮತೆಗೆ ರಹದಾರಿ.
ಅದಾಗಲೇ ಮೊದಲು ತಾಯ ಹಾಲ ಕುಡಿದು ಲಲ್ಲೆಯಿಂದ ತೊದಲು ನುಡಿದ ಭಾಷೆ, ಪರಿಚಿತವಾದ ಪಠ್ಯಕ್ರಮ, ಇತರ ಕಠಿಣ ವಿಷಯಗಳ ತಲೆ ಭಾರದಿಂದ ಹೊರ ತರುವ ಪ್ರಫುಲ್ಲತೆ ಇವೆಲ್ಲವೂ ನಿಮಗೆ ಕಲಿಕೆಯ ಹಾದಿಯಲ್ಲಿ ಸಹಕಾರಿಯಾಗುವುದು.
ಯುಪಿಎಸ್ಸಿ ಹಾದಿಯಲ್ಲಿ ಗುರಿ ಮುಟ್ಟುವ ತವಕದಲ್ಲಿರುವ ಅಭ್ಯರ್ಥಿಗಳು ಆಯ್ದುಕೊಳ್ಳಬಹುದಾದ ಅತ್ಯಂತ ಸೂಕ್ತ ಐಚ್ಛಿಕ ವಿಷಯ ಕನ್ನಡ ಸಾಹಿತ್ಯವೇ ಆಗಿರುತ್ತದೆ ಎನ್ನುವುದು ಅನುಭವಿಗಳ ಅಂಬೋಣ.
ಈ ಕನ್ನಡ ಸಾಹಿತ್ಯದ ಕಲಿಕೆಯೆಂಬುವುದು ಒಂದು ಭಾವೋತ್ಪಾತದ ಪಯಣ..ಒಂದು ಬೆರಗಿನ ಚಾರಣ..ಚಂಪುವಿನ ಕಂಪು,ರಗಳೆಯ ಸೊಗಡು, ವಚನವೆಂಬ ಜೇನತುಡುಗು, ಸಾಂಗತ್ಯದ ಸಂಗೀತದೊಂದಿಗೆ ಹೊಸತೊಂದು ಉದ್ಯಾನವನಕ್ಕೆ ಪ್ರವೇಶ ಅದುವೇ ನವೋದಯದ ರಮ್ಯಚೈತ್ರಕಾಲ.
ಅಲ್ಲಿ ಕುವೆಂಪು,ಕಾರಂತ,ಬೇಂದ್ರೆ,ಮಾಸ್ತಿ, ಯಾರುಂಟು ಯಾರಿಲ್ಲ ? ಕತೆ,ಕವನ,ಕಾದಂಬರಿ,ವಿಮರ್ಶೆ,ನೃತ್ಯ, ನಾಟಕ ಏನುಂಟು ಏನಿಲ್ಲ ?
ಇಂತಹ ಅದ್ಭುತವಾದ ಕನ್ನಡ ಸಾಹಿತ್ಯದ ಸಂಪೂರ್ಣ ಕೋಚಿಂಗ್ ಅನ್ನು ಐಎಎಸ್ ಬಾಬಾ ನಿಮಗಾಗಿ ಕೈಗೊಳ್ಳಲಿದೆ ವಿದ್ವಾಂಸರಾದ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಮತ್ತು ಆಯಿಶಾ ಫರ್ಝಾನ ಯು.ಟಿ ರವರ ಸುಂದರ ಸಹಯೋಗದಲ್ಲಿ.
ಪ್ರಿಯ ವಿದ್ಯಾರ್ಥಿಗಳೇ ಒಮ್ಮೆ ಬಂದು (14 November) ನಡೆಯಲಿರುವ ಡೆಮೋ ಕ್ಲಾಸ್ ಅನ್ನು ತೆಗೆದುಕೊಂಡು ಕನ್ನಡ ಸಾಹಿತ್ಯ ತೆಗೆದುಕೊಳ್ಳುವ ಔಚಿತ್ಯವೇನು ಎಂಬ ಬಗ್ಗೆಗಿನ ನಿಮ್ಮ ಹಲ ಪ್ರಶ್ನೆಗಳನ್ನು ತಿಳಿಯಾಗಿಸಿ ಮುಂದೆ ತಮ್ಮಿಚ್ಛೆಯಂತೆ ಮುಂದುವರೆಯಿರಿ.